1849-96. ವಾಯುಯಾನ ವಿಧಾನದ ಮುಂಚೂಣಿ ಉಪಜ್ಞೆಕಾರ, ಗ್ಲೈಡರ್ ಹಾರಾಟದಲ್ಲಿ ಪ್ರಯೋಗ ಪಟು. ಜರ್ಮನಿಯ ಅಂಕ್ಲಾಮ್‍ನಲ್ಲಿ 1849ರಲ್ಲಿ ಜನಿಸಿದ. ಪಾಟ್ಸ್‍ಡ್ಯಾಮಿನ ವಾಣಿಜ್ಯ ಶಾಲೆ ಮತ್ತು ಬರ್ಲಿನ್ ವಾಣಿಜ್ಯ ಅಕಾಡೆಮಿಗಳಲ್ಲಿ ಅಧ್ಯಯನ ಮಾಡಿದ. ವಾಯುವಿಗಿಂತ ಭಾರತರ ಹಾರಾಟ ಯಂತ್ರಗಳ ನಿರ್ಮಾಣ ಈತನ ಗೀಳು. ಲಿಯೊನಾರ್ಡೊ ಡ ವಿಂಚಿ (1452-1519) ಆ ಮೊದಲು ರಚಿಸಿದ್ದ ಪ್ಲಾವನ ವಾಹನಗಳ ಆಲೇಖ್ಯಗಳನ್ನು ಅಭ್ಯಸಿಸಿದ. ಹಕ್ಕಿಗಳ ಹಾರಾಟದ ಬಗೆಗಳನ್ನೂ ವಿನ್ಯಾಸಗಳನ್ನೂ ಚಿಕಿತ್ಸಕವಾಗಿ ವೀಕ್ಷಿಸಿದ ಫಲ: ಗ್ಲೈಡರುಗಳ ನಿರ್ಮಾಣ. ಇವುಗಳ ನೆರವಿನಿಂದ ನೂರಾರು ಪುಟ್ಟ ಹಾರಾಟಗಳನ್ನು ಯಶಸ್ವಿಯಾಗಿ ನಿರ್ವಹಿಸಿದ. ಆದರೆ ಕೊನೆಯ ಹಾರಾಟದಲ್ಲಿ ಗ್ಲೈಡರ್ ನೆಲಕ್ಕೆ ಅಪ್ಪಳಿಸಿ ಮೃತನಾದ.
 
(ನೋಡಿ- ವೈಮಾಂತರಿಕ್ಷ-ಎಂಜಿನಿಯರಿಂಗ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ